ಶಾಶ್ವತ ಆರ್ಥಿಕತೆ
- Regular Price
- Rs. 300.00
- Sale Price
- Rs. 300.00
- Regular Price
- Unit Price
- per
ಇಪ್ಪತ್ತೊoದನೇ ಶತಮಾನದ ವಿಜ್ಞಾನ ಮತ್ತು ತಂತ್ರಜ್ಞಾನಗಳು ಶತಶತಮಾನಗಳ ಅನುಭವದಿಂದ ನಾವು ಕಟ್ಟಿಕೊಂಡು ಬಂದಿರುವ ಚಿಂತನೆಗಳನ್ನು, ಬದುಕುವ ರೀತಿಯನ್ನು ಅಲುಗಾಡಿಸುವಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿವೆ. ಕೃತಕ ಬುದ್ಧಿಮತ್ತೆ ಯಂತಹ ತಂತ್ರಜ್ಞಾನ ಅದನ್ನು ಸೃಷ್ಟಿಸಿದ ಮನುಷ್ಯನೊಂದಿಗೆ ಸ್ಪರ್ಧೆಗೆ ಇಳಿದಿದೆ. ಆಧುನಿಕ ಅರ್ಥ ವ್ಯವಸ್ಥೆಯ ಸೃಷ್ಟಿಯಾದ ಕೇಂದ್ರೀಕರಣವು ಎಲ್ಲಾ ಸಂಪನ್ಮೂಲಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಅದು ನಾಗರೀಕರನ್ನು ಕೇವಲ ಗ್ರಾಹಕರನ್ನಾಗಿ ನೋಡುತ್ತಿದೆ. ಮನುಷ್ಯನು ಅವನ ನಡವಳಿಕೆಯಿಂದ ತನ್ನ ಸೃಷ್ಟಿಕರ್ತನಾದ ಪ್ರಕೃತಿಗೆ ಮುಳುವಾಗಿದ್ದರೆ, ಅವನು ಸೃಷ್ಟಿಸಿದ ತಂತ್ರಜ್ಞಾನ ಮತ್ತು ಅರ್ಥವ್ಯವಸ್ಥೆ ಅವನ ಇರುವಿಕೆಗೇ ಮುಳುವಾಗ ತೊಡಗಿದೆ. ಜಾಗತಿಕ ತಾಪಮಾನ ಏರಿಕೆಯ ಶಾಖ ಇಂದು ನಮ್ಮ ಮನೆಯ ಹೊಸ್ತಿಲಿಗೆ ಬಂದು ನಿಂತಿದೆ. ನಮ್ಮ ಚಿಂತನೆಗಳನ್ನು/ ಅಭಿವೃದ್ಧಿ ಮಾದರಿಗಳನ್ನು ಮರು ವಿಮರ್ಶೆಗೆ ಒಡಲೇ ಬೇಕಾದ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಪ್ರಕೃತಿಯನ್ನು ನೋಡಿ ಬದುಕುವ ರೀತಿಯನ್ನು ಮರುಕಲಿಯಬೇಕಾದ ಅನಿವಾರ್ಯತೆಯಲ್ಲಿ ಮಾನವಕೋಟಿ ಇದೆ. ಪ್ರಕೃತಿಯೊಳಗೊಂದಿರು ವ ಅರ್ಥ ವ್ಯವಸ್ಥೆಯನ್ನು ಅನುಸರಿಸಿ ನಮ್ಮ ಅರ್ಥ ಚಿಂತನೆಯನ್ನು ಮರು ರೂಪಿಸಬೇಕಿದೆ. ಅರ್ಥಶಾಸ್ತ್ರ ವೆಂದರೆ ಕೇವಲ ಹಣವಲ್ಲ, ಅದು ಸಕಲ ಜೀವಜಂತುಗಳ ಅಳಿವು ಉಳಿವಿನ ಪ್ರಶ್ನೆ, ನೈತಿಕತೆಯ ಪ್ರಶ್ನೆ, 1945ರಲ್ಲಿ ಪ್ರಕಾಶಗೊoಡ ಈ ಪುಸ್ತಕ ನಮ್ಮನ್ನು ಮರುಚಿಂತನೆಗೆ ಹಚ್ಚಬಲ್ಲದು ಮತ್ತು ನಮ್ಮ ಉಳಿವಿಗೆ ದಾರಿದೀಪವಾಗಬಲ್ಲದು. ಪ್ರಕೃತಿಯು ಅಪಾಯದ ಕರೆಗಂಟೆಯನ್ನು ಬಾರಿಸುತ್ತಿರುವಾಗ ಈ ಪುಸ್ತಕದ ಮರು ಓದನ್ನು ಎಲ್ಲರೂ ಮಾಡಬೇಕಿದೆ. ಸರಿಯಾದ ಮನಸ್ಥಿತಿಯಿಂದ ಅರ್ಥಮಾಡಿಕೊಳ್ಳಬೇಕಿ ದೆ ಇದು ಕೇವಲ ತಲೆ ಬಳಸಿ ಓದಲು ಆಗದ ಪುಸ್ತಕ. ಹೃದಯದಿಂದ ಓದಬೇಕಾದ ಪುಸ್ತಕ.