ಒಂದು ಹುಲ್ಲಿನ ಕ್ರಾಂತಿ
- Regular Price
- Rs. 220.00
- Sale Price
- Rs. 220.00
- Regular Price
- Unit Price
- per
ಸರಿಯಾದ ದಿಕ್ಕು ದೆಸೆ ಯಿಲ್ಲದ ಈ ತಲೆಮಾರಿನ ಮನಸ್ಸು ಮತ್ತು ಚಿಂತನೆಯ ಮೇಲೆ ಪ್ರಭಾವ ಬೀರುವಲ್ಲಿ ಕೇವಲ ಕೆಲವೇ ಪುಸ್ತಕಗಳು ಯಶಸ್ವಿಯಾಗಿವೆ. ಅಂತಹ ಕೆಲವೇ ಪುಸ್ತಕಗಳಲ್ಲಿ"ಒಂದು ಹುಲ್ಲಿನ ಕ್ರಾಂತಿ" ವಿಶೇಷವಾದದ್ದು. ಜಪಾನ್ ದೇಶ ಯಾವುದೇ ವಿವೇಚನೆ ಯಿಲ್ಲದೆ ಅಮೆರಿಕಾ ದೇಶದ ಆರ್ಥಿಕ, ಕೈಗಾರಿಕಾ ಮತ್ತು ವ್ಯವಸಾಯ ಮಾದರಿಯನ್ನು ಕಳೆದ ದಶಕಗಳಲ್ಲಿ ಅನುಸರಿಸಿತು. ತನ್ನ ಸ್ವಂತಿಕೆಗೆ ವಿದಾಯ ಹೇಳಿದ್ದರಿಂದ ತನ್ನ ಫಲವತ್ತಾದ ಭೂಮಿಯನ್ನೂ, ಶ್ರೀಮಂತವಾದ ಸಂಸ್ಕೃತಿಯನ್ನೂ ತಾನೇ ತಾನಾಗಿ ದಿವಾಳಿ ಎಬ್ಬಿಸಿಕೊಂಡಿತು. ಇವೆಲ್ಲವನ್ನೂ ಫುಕುವೊಕಾ ಈ ಪುಸ್ತಕದಲ್ಲಿ ಬಹಳ ವಿಷಾದದಿಂದ ದಾಖಲಿಸಿದ್ದಾರೆ.
ಈಗ ಭಾರತವೂ ಅದೇ ಜಾಡನ್ನು ಹಿಡಿದಿರುವುದರಿಂದ ಈ ಪುಸ್ತಕ ನಮಗೆ ಅತ್ಯಂತ ಪ್ರಸ್ತುತವಾಗಿದೆ. ಆದ್ದರಿಂದ ಈ ದೇಶದ ಎಲ್ಲಾ ಪ್ರಜ್ಞಾವಂತರು ಓದಲೇಬೇಕಾದ ಪುಸ್ತಕ ಇದಾಗಿದೆ.
ಮೂಲ ಪುಸ್ತಕಕ್ಕೆ ಅಮೇರಿಕಾದ ಖ್ಯಾತ ಚಿಂತಕ ವೆಂಡಲ್ ಬೆರಿ ಅತ್ಯಂತ ಸಮರ್ಥವಾದ ಮುನ್ನುಡಿ ಬರೆದಿದ್ದರೆ, ಕನ್ನಡದ ಅವತರಣಿಕೆಗೆ ಶ್ರೀ ನಾಗೇಶ್ ಹೆಗಡೆ ಅಷ್ಟೇ ಸಮರ್ಪಕವಾಗಿ ಮುನ್ನುಡಿ ಬರೆದಿದ್ದಾರೆ.
ಕನ್ನಡ ಅನುವಾದದ ಮೊದಲ ಮುದ್ರಣವಾಗಿ ಇಂದಿಗೆ ಮೂರು ದಶಕಗಳು ಕಳೆದಿವೆ ಅಲ್ಲಿಂದ ಇಲ್ಲಿಯವರೆಗೆ ಸಾವಿರಾರು ಓದುಗರು ಈ ಪುಸ್ತಕದ ಪ್ರಭಾವಲಯಕ್ಕೆ ಒಳಗಾಗಿ ತಮ್ಮ ಕೃಷಿ ಹಾಗೂ ಬದುಕಿಗೆ ಹೊಸ ಆಯಾಮ ಪಡೆದಿದ್ದಾರೆ. ಕನ್ನಡದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಪುಸ್ತಕಗಳಲ್ಲಿ ಇದು ಒಂದಾಗಿದೆ.